ಉಳಿತಾಯ ಪ್ರವೃತ್ತಿ
	ವರಮಾನ ನಿರ್ಣಾಯಕವಾದ ಮಾನಸಿಕ ಪ್ರಭಾವಗಳಲ್ಲೊಂದು; ಉಳಿತಾಯ ಮಾಡಬೇಕೆಂಬ ವ್ಯಕ್ತಿಯ ಉತ್ಸುಕತೆ (ಪ್ರೊಪೆನ್ಸಿಟಿ ಟು ಸೇವ್). ಕೇನ್ಸನ ಆರ್ಥಿಕ ಸಿದ್ಧಾಂತದ ಮೂಲ ಸಾಮಗ್ರಿಗಳಲ್ಲಿ ಇದೂ ಒಂದು. ಒಬ್ಬ ವ್ಯಕ್ತಿಯ ಒಟ್ಟು ವರಮಾನಕ್ಕೂ ಅನುಭೋಗ ವೆಚ್ಚಗಳಿಗಾಗಿ ಬಳಸದಿರುವ ವರಮಾನ ಭಾಗಕ್ಕೂ ಇರುವ ಶೇಕಡಾ ಸಂಬಂಧವನ್ನು ಸೂಚಿಸುವ ಸಾಂಖ್ಯಿಕೀಯ (ಸ್ಟಾಟಿಸ್ಟಿಕಲ್) ಪದಪುಂಜವಾಗಿ ಇದನ್ನು ಕೇನ್ಸ್ ಮೊದಲು ಬಳಸಿದ. 19ನೆಯ ಶತಮಾನದ ಅಭಿಜಾತ ಪಂಥದ ಅರ್ಥಶಾಸ್ತ್ರಜ್ಞರಾದ ಲಾಡರ್ ಡೇಲ್ ಮತ್ತು ಮಾಲ್ಥಸರು ಈ ಪ್ರವೃತ್ತಿಯನ್ನು ಕುರಿತ ಸ್ಥೂಲ ಕಲ್ಪನೆ ಹೊಂದಿದ್ದುಂಟು. ಆದರೆ ಕೇನ್ಸನ ಜನರಲ್ ಥಿಯೊರಿ ಆಫ್ ಎಂಪ್ಲಾಯ್‍ಮೆಂಟ್, ಇಂಟರೆಸ್ಟ್ ಅಂಡ್ ಮನಿ ಎಂಬ ಪುಸ್ತಕ ಪ್ರಕಟವಾಗುವವರೆಗೂ (1936) ಇದಕ್ಕೆ ಅಷ್ಟೇನೂ ಪ್ರಾಮುಖ್ಯ ಇದ್ದಿರಲಿಲ್ಲ.

	ಉಳಿತಾಯ ಪ್ರವೃತ್ತಿಗೆ ಹೊಂದಿಕೊಂಡ ಇನ್ನೊಂದು ಪದಪುಂಜವೆಂದರೆ ಅನುಭೋಗ ಪ್ರವೃತ್ತಿ. ಬಂದ ವರಮಾನದಲ್ಲಿ ಬಯಕೆಯ ಪೂರೈಕೆಗಾಗಿ ಬಳಸಿಕೊಂಡದ್ದು ಅನುಭೋಗ ವೆಚ್ಚ; ಬಳಸದಿದ್ದದ್ದು ಉಳಿತಾಯ. ಆದ್ದರಿಂದ ಉಳಿತಾಯ ಪ್ರವೃತ್ತಿಯೂ ಅನುಭೋಗ ಪ್ರವೃತ್ತಿಯೂ ಅವಳಿ-ಜವಳಿಗಳು. ಒಂದರ ಬೆನ್ನಿಗೆ ಇನ್ನೊಂದು ಅಂಟಿಕೊಂಡೇ ಬಂದದ್ದು. ಅನುಭೋಗ ಪ್ರವೃತ್ತಿಯನ್ನರಿಯುವುದರಿಂದ ಉಳಿತಾಯ ಪ್ರವೃತ್ತಿಯನ್ನರಿಯುವುದು ಸಾಧ್ಯ.

	ಒಬ್ಬನ ವರಮಾನ ಹೆಚ್ಚಿದಂತೆಲ್ಲ ಆತನ ಉಳಿತಾಯ ಹೆಚ್ಚುವುದೆಂಬುದನ್ನೂ ಉಳಿತಾಯ ಹೆಚ್ಚಿದಾಗ ವರಮಾನವೂ ಅಧಿಕವಾಗುವುದೆಂಬುದನ್ನೂ ಉಳಿತಾಯ ಪ್ರವೃತ್ತಿಯ ವಿವೇಚನೆಯಿಂದ ತಿಳಿದುಕೊಳ್ಳಬಹುದು. ಈ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಸ್ವಾರಸ್ಯದ ಸಂಗತಿಯೆಂದರೆ, ವರಮಾನ ಹೆಚ್ಚಿದಾಗ ಅನುಭೋಗ ಉಳಿತಾಯಗಳೆರಡೂ ಹೆಚ್ಚುವುವಾದರೂ ಉಳಿತಾಯ ಹೆಚ್ಚುವ ವೇಗದಲ್ಲಿ ಅನುಭೋಗ ಏರುವುದಿಲ್ಲ. ಪ್ರತಿಯೊಂದು ವರಮಾನ ಘಟಕ ಹೆಚ್ಚಿದಾಗಲೂ ಅದರ ಹಿಂದೆಯೇ ಅಧಿಕವಾಗುವ ಅಂಚಿನ ಅನುಭೋಗ ಪ್ರವೃತ್ತಿಗಿಂತಲೂ ಹೆಚ್ಚಿನ ವೇಗದಲ್ಲಿ ಉಳಿತಾಯ ಪ್ರವೃತ್ತಿ ಏರುತ್ತದೆ. ಇದನ್ನು ಪು.813ರಲ್ಲಿರುವ ಕೋಷ್ಟಕದ ಸಹಾಯದಿಂದ ಸ್ಪಷ್ಟಪಡಿಸಬಹುದು.

	ಅದೇ ಕೋಷ್ಟಕದಲ್ಲಿ ಒಬ್ಬ ವ್ಯಕ್ತಿಯ ವರಮಾನ 3,000 ರೂ. ಗಳಿಂದ 10,000 ರೂ.ಗಳವರೆಗೆ ಒಂದೊಂದು ಸಾರಿಗೆ 1,000 ರೂ.ಗಳಂತೆ ಅಧಿಕವಾಗುತ್ತದೆಯೆಂದು ಊಹಿಸಿಕೊಂಡು, ಇಂಥ ಪ್ರತಿಯೊಂದು ವೃಧ್ಯಂಶದಲ್ಲೂ ಆ ವ್ಯಕ್ತಿ ಎಷ್ಟು ಅನುಭೋಗ ವೆಚ್ಚ ಮಾಡುತ್ತಾನೆ (ಅಂಚಿನ ಅನುಭೋಗ ಪ್ರವೃತ್ತಿ), ಎಷ್ಟು ಉಳಿತಾಯ ಮಾಡುತ್ತಾನೆ (ಅಂಚಿನ ಉಳಿತಾಯ ಪ್ರವೃತ್ತಿ) ಎಂಬುದನ್ನು ತೋರಿಸಿದೆ. ಆ ವ್ಯಕ್ತಿಯ ವರಮಾನ 3,000 ರೂ. ಇದ್ದಾಗ ಆತನ ಅನುಭೋಗ ವೆಚ್ಚ 3,110 ರೂ. ಆಗಿದೆ. ಪ್ರತಿಯೊಬ್ಬನೂ ಆತನ ವರಮಾನವೆಷ್ಟೇ ಇರಲಿ, ಅನುಭೋಗಕ್ಕಾಗಿ ಒಂದು ಕನಿಷ್ಠ ವೆಚ್ಚ ಮಾಡಲೇಬೇಕಾದ್ದು ಅನಿವಾರ್ಯ. ಇಲ್ಲಿ ಆತ ವರಮಾನಕ್ಕಿಂತ 110 ರೂ. ಹೆಚ್ಚಾಗಿ ವೆಚ್ಚ ಮಾಡಿದ್ದಾನೆ. ಸಾಲ ಮಾಡಿಯೋ ಹಿಂದಿನ ಉಳಿತಾಯವನ್ನು ಕರಗಿಸಿಯೋ ಆತ ಈ ವೆಚ್ಚ ತೂಗಿಸಬೇಕಾದೀತು. ಈ ಘಟ್ಟದಲ್ಲಿ ಆತನ ಉಳಿತಾಯ ಧನಾತ್ಮಕವಾದದ್ದು (-110 ರೂ.)

	ಆ ವ್ಯಕ್ತಿಯ ವರಮಾನ 3,000 ರೂ.ಗಳಿಂದ 4,000 ರೂ.ಗಳಿಗೆ ಏರಿದಾಗ (ವೃಧ್ಯಂಶ 1,000 ರೂ.) ಆತನ ಅನುಭೋಗ ವೆಚ್ಚವೂ 4,000 ರೂ. ಆಗಿರುತ್ತದೆ. ಆತನ ವರಮಾನ 1,000 ರೂ. ಗಳಷ್ಟು ಹೆಚ್ಚಾದಾಗ ಅವನ ವೆಚ್ಚ 890 ರೂ.ಗಳಷ್ಟು ಏರುತ್ತದೆ. ಆತನ ಅಂಚಿನ ಅನುಭೋಗ ಪ್ರವೃತ್ತಿ 890/1,000 ಅಥವಾ 0.89. ಆತನಿಗೆ 3,000 ರೂ. ವರಮಾನವಿದ್ದಾಗ -110 ರೂ. ಆತನ ನಿವ್ವಳ ಉಳಿತಾಯವಾಗಿತ್ತು. ಈಗ ಆತನ ಉಳಿತಾಯ 0. ಎಂದರೆ ಈಗ ಅವನ ಉಳಿತಾಯ ಪ್ರವೃತ್ತಿ 110/1,000 ಅಥವಾ 0.11.

	ಆತನ ವರಮಾನ 5,000 ರೂ. ಗಳಿಗೆ ಏರಿದಾಗ (ವೃಧ್ಯಂಶ 1,000 ರೂ.) ಅನುಭೋಗ ವೆಚ್ಚ 4,850 ರೂ.; ಅಂಚಿನ ಅನುಭೋಗ ಪ್ರವೃತ್ತಿ 850/1,000 ಅಥವಾ 0.85. ಹಿಂದಿನ ಘಟ್ಟದಿಂದ ಈ ಘಟ್ಟಕ್ಕೆ ಅವನ ನಿವ್ವಳ ಉಳಿತಾಯ 150 ರೂ.; ಅಂಚಿನ ಉಳಿತಾಯ ಪ್ರವೃತ್ತಿ 150/1,000 ಅಥವಾ 0.15.

	ವರಮಾನ 5,000 ರೂ. ಗಳಿಂದ 6,000 ರೂ.ಗಳಿಗೆ ಏರಿದಾಗ ವೆಚ್ಚ 5,600 ರೂ. : ಹಿಂದೆ ಮಾಡುತ್ತಿದ್ದ ವೆಚ್ಚವಾದ 4,850 ರೂ. ಗಳಿಗಿಂತ ಈಗ ಅದು 750ರೂ. ಅಧಿಕ, ಆದ್ದರಿಂದ ಅವನ ಅಂಚಿನ ಅನುಭೋಗ ಪ್ರವೃತ್ತಿ 750/1,000 ಅಥವಾ 0.75.

ಉಳಿತಾಯ ಪ್ರವೃತ್ತಿ
ತೆರಿಗೆ ಕೊಟ್ಟ ಮೇಲೆ ಉಳಿಯುವ ವರಮಾನ
ಅನುಭೋಗ ವೆಚ್ಚ
ಅಂಚಿನ ಅನುಭೋಗ ವೆಚ್ಚ
ನಿವ್ವಳ ಉಳಿತಾಯ (1) - (2)
ಅಂಚಿನ ಉಳಿತಾಯ ಪ್ರವೃತ್ತಿ

(1)
(2)
(3)
(4)
(5)

ರೂ.
  ಂ       3000

 ಃ    4000

  ಅ    5000

 ಆ    6000

 ಇ    7000

 ಈ    8000

 ಉ    9000

 ಊ    10000

ರೂ.
3110

4000

4850

5600

6240

6830

7360

7850

--

 890/1000  = 0.80
   
850/1000  = 0.85

759/1000  = 0.75

640/1000 = 0.64

590/1000  = 0.59

 530/1000 = 0.53

 490/1000  = 0.49 
  
ರೂ.
-110

0

+ 150

+ 400

+ 760

+ 1170

+ 1640

+ 2150

--

10/1000 = 0.11

150/1000 = 0.15

250/1000 = 0.25

360/1000  = 0.36

410/1000 = 0.41

470/1000 = 0.47

510/1000 = 0.51

ಈ ಘಟ್ಟದಲ್ಲಿ ಆತನ ಉಳಿತಾಯ 400 ರೂ. ಇದು ಹಿಂದಿನ ಘಟ್ಟದ ಉಳಿತಾಯವಾದ 150 ರೂ. ಗಳಿಗಿಂತ 250 ರೂ. ಅಧಿಕ. ಆತನ ಅಂಚಿಯ ಉಳಿತಾಯ ಪ್ರವೃತ್ತಿ 250/1000 ಅಥವಾ 0.25.

	ಇದೇ ರೀತಿ ಮುಂದಿನ ವರಮಾನದ ಹೆಚ್ಚಳಗಳಿಗೂ ಆತನ ಅನುಭೋಗ ಪ್ರವೃತ್ತಿ ಮತ್ತು ಉಳಿತಾಯ ಪ್ರವೃತ್ತಿಗಳ ಅಂಕಗಳನ್ನು ಕೊಟ್ಟಿದೆ.

	1. ಒಬ್ಬ ವ್ಯಕ್ತಿಯ ಒಟ್ಟು ವರಮಾನದ (ಙ) ಒಂದು ಭಾಗ ಅನುಭೋಗ ವೆಚ್ಚ (ಅ); ಉಳಿದ ಭಾಗವೇ ಉಳಿತಾಯ (S) :
					ಒಟ್ಟು ಉಳಿತಾಯ		S
	ಸರಾಸರಿ ಉಳಿತಾಯ ಪ್ರವೃತ್ತಿ = 		 	 =		
					ಒಟ್ಟು ವರಮಾನ		ಙ
	2. ವರಮಾನದ ಪ್ರತಿಯೊಂದು ಮಧ್ಯಂಶವನ್ನೂ 1 ಎಂದು ಇಟ್ಟುಕೊಂಡರೆ ಅದರ ಒಂದು ಭಿನ್ನಾಂಶವೇ ಅಂಚಿನ ಅನುಭೋಗ ವೆಚ್ಚ (∆ಛಿ) : ಇನ್ನೊಂದು ಭಿನ್ನಾಂಶವೇ ಅಂಚಿನ ಉಳಿತಾಯ (∆s) :
		∆ಥಿ-∆ಛಿ=∆s  ಆದ್ದರಿಂದ
					∆s
	ಅಂಚಿನ ಉಳಿತಾಯ ಪ್ರವೃತ್ತಿ = _______
					∆ಥಿ

					    ∆ಛಿ
				= 1 - ______
					   ∆ಥಿ
	3. ವರಮಾನ ಹೆಚ್ಚಿದಂತೆ ಅಂಚಿನ ಅನುಭೋಗ ಪ್ರವೃತ್ತಿ ಇಳಿಯುತ್ತ ಸಾಗುತ್ತದೆ : ಅಂಚಿನ ಉಳಿತಾಯ ಪ್ರವೃತ್ತಿ ಏರುತ್ತ ನಡೆಯುತ್ತದೆ.

	ಹಿಂದಿನ ಕೋಷ್ಟಕದಲ್ಲಿ ಅಂಕಿಗಳ ಆಧಾರದ ಮೇಲೆ ಅನುಭೋಗ ಹಾಗೂ ಉಳಿತಾಯ ಪ್ರವೃತ್ತಿಗಳನ್ನು ತೋರಿಸುವ ನಕ್ಷೆ ರಚಿಸುವುದು ಸಾಧ್ಯ.

	ನಕ್ಷೆ 1ರಲ್ಲಿ ವಿವಿಧ ವರಮಾನಗಳ ಘಟ್ಟಗಳಲ್ಲಿನ ಅನುಭೋಗ ಉಳಿತಾಯಗಳನ್ನು ತೋರಿಸಲಾಗಿದೆ. ವರಮಾನ ಗಳಿಸುತ್ತಿರುವ ವ್ಯಕ್ತಿ ಒಂದು ಪಕ್ಷ ತನಗೆ ಬಂದ ವರಮಾನವನ್ನೆಲ್ಲ ಅನುಭೋಗಕ್ಕಾಗಿ ವೆಚ್ಚ ಮಾಡುವುದಾದರೆ ಆಗ ವರಮಾನದ ಎಲ್ಲ ಘಟ್ಟಗಳಲ್ಲೂ ಅವನ ವರಮಾನ ಹಾಗೂ ಅನುಭೋಗ ವೆಚ್ಚಗಳು ಸಮ ಸಮನಾಗಿರುತ್ತವೆ. ಆಗ ಆತನ ಅನುಭೋಗ ರೇಖೆ ಔಘಿ ಮತ್ತು ಔಙ ಗಳ ನಡುವೆ 450 ಕೋನ ಸೃಷ್ಟಿಸಿ ನೇರವಾಗಿ ಸಾಗುತ್ತದೆ (ಔಒ). ಆದರೆ ವಾಸ್ತವವಾಗಿ ಅವನ ವರಮಾನಕ್ಕೂ ಅನುಭೋಗಕ್ಕೂ ಅಂತರವುಂಟು. ಹಿಂದಿನ ಕೋಷ್ಟಕದಲ್ಲಿ ಕೊಟ್ಟಿರುವಂತೆ 3,000 ರೂ. ವರಮಾನದ ಘಟ್ಟದಲ್ಲಿ (ಂ) ಆತನ ವರಮಾನಕ್ಕಿಂತ ಅನುಭೋಗವೆಚ್ಚ ಹೆಚ್ಚು. ಆಗ ಸಂಭವಿಸುವುದು ಪ್ರತ್ಯುಳಿತಾಯ (ಡಿಸ್-ಸೇವಿಂಗ್). ಮುಂದಣ ವರಮಾನ ಘಟ್ಟದಲ್ಲಿ (ಃ) ವರಮಾನವೂ ಅನುಭೋಗವೂ ಸಮ. ಅಲ್ಲಿಂದಾಚೆಯ ಘಟ್ಟಗಳಲ್ಲಿ (ಅ,ಆ,ಇ,ಈ,ಉ,ಊ) ವರಮಾನಕ್ಕಿಂತ ಅನುಭೋಗವೆಚ್ಚ ಕಡಿಮೆ. ಇವನ್ನೆಲ್ಲ Pಓ ರೇಖೆ ಪ್ರತಿನಿಧಿಸುತ್ತದೆ. 

	ಂ ವರಮಾನ ಘಟ್ಟದಲ್ಲಿ ಅನುಭೋಗದ 450 ಯ ರೇಖೆಯ ಮೇಲೆ, ಎಡಗಡೆಗೆ ಇದೆ (ಪ್ರತ್ಯುಳಿತಾಯ). ಘಟ್ಟದಲ್ಲಿ 450 ಯ ರೇಖೆಯೂ ಅನುಭೋಗ ರೇಖೆಯೂ ಸಂಧಿಸುತ್ತವೆ. (ವರಮಾನ-ಅನುಭೋಗ ಸಮ). ಇದು ಮುಂದಿನ ಘಟ್ಟಗಳಲ್ಲಿ ವರಮಾನ ರೇಖೆಗೂ 450 ರೇಖೆಗಿಂತ ಕೆಳಕ್ಕೆ ಬಲಗಡೆಗೆ ಸಾಗಿದೆ. (ಉಳಿತಾಯ-ಉದಾಹರಣೆ : 7,000 ಘಟ್ಟ). ಒಂದು ವರಮಾನ ಘಟ್ಟದಲ್ಲಿ 450 ಯ ರೇಖೆಗೂ ಅನುಭೋಗ ರೇಖೆಗೂ ಇರುವ ದೂರದಿಂದ ಉಳಿತಾಯದ ಅಥವಾ ಪ್ರತ್ಯುಳಿತಾಯದ ಪರಿಮಾಣವನ್ನರಿಯಬಹುದು. (ಉದಾಹರಣೆ : 7,000 ರೂ. ವರಮಾನ ಹಂತದಲ್ಲಿ ತಳಕ್ಕೆ ಲಂಬವಾಗಿ ಎಳೆದ ರೇಖೆಯ ಮೇಲೆ ಇ ಗೂ 450 ಯ ರೇಖೆಗೂ ನಡುವಣ ದೂರ.)

ಚಿತ್ರ-ನಕ್ಷೆ-1

ನಕ್ಷೆ-1ರಲ್ಲಿ ಅನುಭೋಗ ಉಳಿತಾಯಗಳೆರಡೂ ವ್ಯಕ್ತವಾಗುತ್ತವೆ. ಉಳಿತಾಯವನ್ನೇ ಪ್ರತ್ಯಕ್ಷವಾಗಿ ನಕ್ಷೆ 2ರಲ್ಲಿ ತೋರಿಸಿದೆ : 
	ಪ್ರತ್ಯುಳಿತಾಯದ ಘಟ್ಟದಲ್ಲಿ ಉಳಿತಾಯ ರೇಖೆ ಘಿ ಅಕ್ಷದ ಕೆಳಕ್ಕಿರುವುದನ್ನು ಗಮನಿಸಬೇಕು.
ಉಳಿತಾಯ ಪ್ರವೃತ್ತಿಯ ಪ್ರಾಮುಖ್ಯ : ಕೇನ್ಸ್ ನೀಡಿರುವ ಸಮಗ್ರ ಆರ್ಥಿಕ ವಿಶ್ಲೇಷಣೆಯ ಮುಖ್ಯ ಸಾಧನಗಳಲ್ಲಿ ಉಳಿತಾಯ ಪ್ರವೃತಿಯನ್ನು ಕುರಿತಾದ ವಿವೇಚನೆಯೂ ಒಂದು. ಸುದೃಢ ಆರ್ಥಿಕಾಭಿವೃದ್ಧಿ ಸಾಧಿಸಬೇಕೆಂಬ ಉದ್ದೇಶ ಹೊಂದಿರುವ ಭಾರತದಂಥ ಪ್ರಜಾಸತ್ತಾತ್ಮಕ ರಾಷ್ಟ್ರಗಳ ದೃಷ್ಟಿಯಲ್ಲಿ ಈ ಬಗೆಯ ವಿವೇಚನೆಯೂ ಅಧ್ಯಯನವೂ ಬಹಳ ಮುಖ್ಯ. 

ಚಿತ್ರ-ನಕ್ಷೆ-2

	ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನುಭೋಗ ಪ್ರವೃತ್ತಿ ಹೆಚ್ಚಿನ ಮಟ್ಟದಲ್ಲಿದ್ದು ಉಳಿತಾಯ ಕಡಿಮೆಯಾಗಿರುವುದರಿಂದ ಬಂಡವಾಳ ನಿಯೋಜನೆ ಕುಂಠಿತವಾಗುತ್ತದೆ. ಆದ್ದರಿಂದ ಈ ರಾಷ್ಟ್ರಗಳಲ್ಲಿ ಉಳಿತಾಯ ಪ್ರವೃತ್ತಿ ಹೆಚ್ಚಿಸುವುದು ಸರ್ಕಾರದ ಅತ್ಯಂತ ಜರೂರಿನ ಕರ್ತವ್ಯ. ಆದರೆ ವರಮಾನದ ಮಟ್ಟವೇ ತುಂಬ ಕೆಳಗಿದ್ದು, ಪ್ರತ್ಯುಳಿತಾಯದ ಪರಿಸ್ಥಿತಿಯಿದ್ದರೆ ಆಗ ಒತ್ತಾಯ-ಪ್ರಚಾರಗಳೇ ಮುಂತಾದ ಮಾರ್ಗಗಳಿಂದ ಉಳಿತಾಯ ಪ್ರವೃತ್ತಿ ಬೆಳಸುವುದು ಸಾಧ್ಯವಾಗುವುದಿಲ್ಲ. ಉಳಿತಾಯ ಪ್ರವೃತ್ತಿ ಹೆಚ್ಚದೆ ಬಂಡವಾಳ ನಿಯೋಜನೆ, ಉತ್ಪಾದನೆ, ಉದ್ಯೋಗ, ವರಮಾನಗಳು ಹೆಚ್ಚುವುದಿಲ್ಲ. ವರಮಾನ ಹೆಚ್ಚದೆ ಉಳಿತಾಯ ಪ್ರವೃತ್ತಿ ಹೆಚ್ಚುವುದಿಲ್ಲ. ಉಳಿತಾಯ ವರಮಾನಗಳು ಪರಸ್ಪರ ಅನುಚರಿಗಳು. ಇದು ಸಮಸ್ಯೆ.					             
(ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ